ಶಧರ್ಮಾಧಿಕಾರಿಗಳು
ಧರ್ಮಾಧಿಕಾರಿಗಳು ಹಾಗು ಶ್ರೀ ಕ್ಷೇತ್ರದ ಅಧ್ಯಕ್ಷರು ಆದ ಶ್ರೀ ಶ್ರೀ ರಂಗನಾಥನಂದ ಸ್ವಾಮಿಯವರು ಮುನೇಶ್ವರ, ನಂದೀಶ್ವರ ಸ್ವಾಮಿಯ ಪರಮ ಭಕ್ತರು ಹಾಗು ಭಗವಂತನ ವಾಚಕರು ತಮ್ಮ ಕುಟುಂಬದ ದೈವನಾದ ಶ್ರೀ ಭಕ್ತಮುನೇಶ್ವರನನ್ನು ಪೂಜಿಸುತ್ತ, ಜನರ ಕಷ್ಟಗಳಿಗೆ ಸ್ಪಂದಿಸುತ್ತ ಶ್ರೀ ಕ್ಷೇತ್ರದ ಬೆಳವಣಿಗೆಗೆ ಮೂಲ ಕಾರಣಕರ್ತರು.
ಆ ಭಗವಂತನು ಅನುಗ್ರಹ ತೋರಿದಂತೆ ದಿನ ನಿತ್ಯ ಪ್ರಶ್ನಾವಳಿಗಳನ್ನು ನಡೆಸಿ, ಬರುವ ಭಕ್ತಾದಿಗಳಿಗೆ ಮಾರ್ಗದರ್ಶನ, ಕಷ್ಟ ಕಾರ್ಪಣ್ಯಗಳಿಗೆ ಹೋಗಲಾಡಿಸುವುದು, ಬಡಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಅಭಯ ದಾನ, ಅನ್ನದಾನ ಇತ್ಯಾದಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಶ್ರೀಯುತರು ಭಗವಂತನ ಸೇವೆಯಲ್ಲಿ ಸದಾ ನಿರತರು ಮತ್ತು ೧೦೮ ಜನ ಭಕ್ತರುಗಳಿಗೆ ಹಾಗು ಸಾವಿರಾರು ಜನ ಭಕ್ತಾದಿಗಳಿಗೆ ಮಾರ್ಗದರ್ಶಕರು.
ಶ್ರೀ ರಂಗನಾಥ ಸ್ವಾಮಿಗಳು ಪದವೀದರರಲ್ಲ ಮತ್ತು ಯಾವುದೇ ಪಿ.ಹೆಚ್.ಡಿ ಮಾಡಿರುವ ಸಂಶೋದಕರಲ್ಲದಿದ್ದರು – ಮುಗ್ಧ ಮನಸ್ಸುಳ್ಳ ಒಲಿಯದನ್ನು, ಕೆಟ್ಟದ್ದನ್ನು ಸ್ವಾಗತಿಸುವ ಸಾದ್ವಿಮಣಿ, ಶ್ರೀಯುತರು ಕಂಡದ್ದನ್ನು ಕಂಡಂತೆ ಹೇಳುವ ಅವರ ದಿವ್ಯ ದೃಷ್ಠಿಗೆ ಎಂತಹವರೂ ತಲೆದೂಗಬೇಕು.