ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಶುಭ್ರ ಬಿಳಿ ಉಡುಗೆ ಉಟ್ಟು 108 ಜನ ಭಕ್ತರುಗಳು ಸ್ವಾಮಿಯ ಸೇವಕರುಗಳು, ಕಟ್ಟಬದ್ದ, ಶಿಸ್ತಿನ ಸಿಪಾಯಿಯಂತೆ ಇರುವ ಸ್ವಯಂ ಸೇವಕರ ದಯೆ ಇದು. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಈ ಬಳಗ ತನ್ನ ಸ್ವಂತ ಬಂಧು, ಬಳಗದವರೊಡನೆ ಬೆರೆತಂತೆ ಬೆರೆತು ಬಿಡುತ್ತಾರೆ. ಇವರು ಸ್ವಾಮಿಯ ಆಪ್ತ ಸಹಾಯಕರು ಇವರು ಸ್ವಾಮಿಯ ಬೆನ್ನೆಲುಬಿನಂತೆ, ಪ್ರತಿಬಿಂಬದಂತೆ, ಹೆಜ್ಜೆ ಹಾಕುವ ದೊಡ್ಡ ಭಕ್ತರು, ಎರಡನೇ ಮತ್ತು ಮೂರನೇ ಭಕ್ತರುಗಳು ಮತ್ತು ೧೦೮ ಜನ ಭಕ್ತರುಗಳು ಅವರವರ ಶಕ್ತಿಮೀರಿ ಕಾಯಕವೇ ಕೈಲಾಸ ಎನ್ನುವ ಸೇವಕರನ್ನು ಶ್ರೀ ಭಕ್ತ ಮುನೇಶ್ವರ ಹೊಂದಿದ್ದು, ಇದೊಂದು ಪುಣ್ಯಧಾಮ.